ಇದೊಂದು ಮಹಾ ಸಂಗಮ, ಅದ್ಧೂರಿ ಸಿನಿಮಾ ಸಹ. ಮೊದಲ ಬಾರಿಗೆ ಡಾ ಶಿವರಾಜಕುಮಾರ್, ಕಿಚ್ಚ ಸುದೀಪ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದರ ನಿರ್ದೇಶಕ ಹ್ಯಾಟ್ ಟ್ರಿಕ್ ನಿರ್ದೇಶಕ ಪ್ರೇಮ್.
೧೦೦ಕ್ಕೂ ಹೆಚ್ಚು ಸಿನಿಮಾಗಳ ನಾಯಕ ಡಾ ಶಿವರಾಜಕುಮಾರ್, ೫೦ಕ್ಕೂ ಹೆಚ್ಚು ಸಿನಿಮಗಳು ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿ ದೇಶಾದ್ಯಂತ ಖ್ಯಾತಿ ಹಬ್ಬಿಸಿಕೊಂಡಿರುವ ಕಿಚ್ಚ ಸುದೀಪ್ ಅವರು ಡಾ ಸಿ ಆರ್ ಮನೋಹರ್ ಅವರ ಅತ್ಯಂತ ಅದ್ದೂರಿ ವೆಚ್ಚದಲ್ಲಿ, ಬಹು ಭಾಷೆಗಳಲ್ಲಿ ನಿರ್ಮಾಣ ಆಗಲು ಸಿದ್ದವಾಗುತ್ತಿದೆ. ಡಾ ಸಿ ಆರ್ ಮನೋಹರ್ ಈಗಾಗಲೇ ಡಾ ಶಿವರಾಜಕುಮಾರ್ ಅವರ ‘ವಜ್ರಕಾಯ’, ಉಪೇಂದ್ರ ಅವರ ‘ಶಿವಂ’ ಹಾಗೂ ಇನ್ನಿತರ ಸಿನಿಮಾಗಳ ನಿರ್ಮಾಣ ಮಾಡಿದವರು.
ಡಿಸೆಂಬರ್ ೨೫ ರಂದು ಕ್ರಿಸ್ಮಸ್ ಹಬ್ಬದಂದು ಈ ದೊಡ್ಡ ಮಟ್ಟದ ಸಿನಿಮಾ ಶೀರ್ಷಿಕೆ ಅನಾವರಣ ಆಗಲಿದೆ ಎಂದು ಪ್ರೇಮ್ ತಿಳಿಸಿದ್ದಾರೆ.
ನಿರ್ದೇಶಕ ಪ್ರೇಮ್ ಅವರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಲು ಬೆಂಗಳೂರು ಅರಮನೆ ಆಯ್ಕೆ ಮಾಡಿಕೊಂಡಿದ್ದಾರೆ.